
28th January 2025
ಮೇಗಳಾಪುರ ಶಾಲೆಗೆ ಸಮವಸ್ತç, ಡ್ರಂ ಸೆಟ್ ಕೊಡುಗೆ ನೀಡಿದ ದಾನಿಗಳು
ಮಳವಳ್ಳಿ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳಪುರ ಶಾಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ೭೬ನೇ ಗಣರಾಜ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಗ್ರಾಮ ಪಂಚಾಯತಿ ಸದಸ್ಯ ವೀರಸ್ವಾಮಿ ಡ್ರಮ್ ಸೆಟ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಚೆನ್ನಾಗಿ ವಿದ್ಯೆಯನ್ನು ಕಲಿತು ಈ ದೇಶದ ಉತ್ತಮ ಪ್ರಜೆಯಾಗಬೇಕೆಂದು ಕರೆ ನೀಡಿದರು.
ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್ ಸಮವಸ್ತ್ರ ಹಾಗೂ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ ನೀಡುವುದರ ಮೂಲಕ ಶಾಲಾ ಆವರಣದಲ್ಲಿ ರಂಗು ರಂಗಿನ ರಂಗೋಲಿಗಳಿAದ ಸಿಂಗರಿಸಿ ಧ್ವಜಾರೋಹಣ ಮಾಡಲಾಯಿತು. ಗ್ರಾಮದ ಮಹೇಶ್ ರವರು ಮಕ್ಕಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು ಹಾಗೂ ಇದೇ ಗ್ರಾಮದ ನಿವೃತ್ತ ಶಾಲಾ ಶಿಕ್ಷಕಿ ಶಿವಮ್ಮ ಶಾಲೆಗೆ ಡ್ರಂ ಸೆಟ್ ಕೊಡುಗೆಯಾಗಿ ನೀಡಿದರು. ದಾನಿ ಮಹೇಶ್ ರವರನ್ನು ಎಸ್ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್ ಅಭಿನಂದಿಸಿದರು.
ಮುಖ್ಯ ಶಿಕ್ಷಕರಾದ ರಾಜು, ಅತಿಥಿ ಶಿಕ್ಷಕರಾದ ಚುಂಚಣ್ಣ, ಸಹ ಶಿಕ್ಷಕಿ ಆರ್ ನಿರ್ಮಲ, ಪೋಷಕರಾದ ಸುರೇಶ್, ನಾಗರಾಜು, ಶೋಭಾ, ಮಹಾಲಕ್ಷ್ಮಿ, ನಾಗರತ್ನ ಪೋಷಕರು ಎಸ್ಡಿಎಂಸಿ ಸದಸ್ಯರುಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಕ್ಕಳ ಕಲಾ ಶಿಬಿರ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ನಾಯಕ ಸ್ಟೂಡೆಂಟ್ ಫೆಡರೇಶನ್ ಗೋಕಾಕ್ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಗೋಕಾಕ್
ಮಾರಿಹಾಳ ಗ್ರಾಮದ “ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ”ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನಬಾರ್ಡ್ ಯೋಜನೆಯ ಪ್ರತಿ ಶತ 3% ಬಡ್ಡಿ ದರದಲ್ಲಿ ಟ್ರ್ಯಾಕ್ಟರಗಳನ್ನು ವಿತರಿಸಲಾಯಿತು